ಪಟಿಕ
ಸಾಮಾನ್ಯವಾಗಿ ಸ್ಫಟಿಕೀಕರಣದ ನೀರುಳ್ಳ ಅಲ್ಯೂಮಿನಿಯಮ್ ಮತ್ತು ಇನ್ನೊಂದು ಧಾತುವಿನ ಜೋಡಿಸಲ್ಫೇಟ್ (ಆಲ್ಮ್). ಸರ್ವಸಾಮಾನ್ಯವಾಗಿ ಪಟಿಕಗಳ ಸಾರ್ವತ್ರಿಕ ಸೂತ್ರವನ್ನು ಂಟ2[Sಔ4]3ಒSಔ424ಊ2ಔ ಎಂದು ಬರೆಯಬಹುದು. ಇಲ್ಲಿ ಒ ಎಂದರೆ ಪೊಟ್ಯಾಸಿಯಮ್ ಸೋಡಿಯಮ್, ಬೆಳ್ಳಿ, ಸೀಸಿಯಮ್, ರುಬಿಡಿಯಮ್, ಥ್ಯಾಲಿಯಮ್ ಇಂಥ ಯಾವುದಾದರೊಂದು ಲೋಹದ ಪರಮಾಣು ಇರಬಹುದು. ಇಲ್ಲವೇ ಅಮೊನಿಯಮಿನಂಥ ರ್ಯಾಡಿಕಲ್ ಇರಬಹುದು. ಮೇಲಿನ ಸೂತ್ರದಲ್ಲಿ ಅಲ್ಯೂಮಿನಿಯಂನ ಬದಲು ಕಬ್ಬಿಣ ಯಾಕ್ರೋಮಿಯಮ್ಮಿನಂಥ ಧಾತುಗಳ ಪರಮಾಣುಗಳುಳ್ಳ ಅಥವಾ ಸಲಫೇಟ್ ಬದಲು ಸಿಲಿಕೇಟ್ ರ್ಯಾಡಿಕಲುಗಳುಳ್ಳ ಸಂಯುಕ್ತಗಳನ್ನು ಸಹ ಪಟಿಕಗಳೆಂದೇ ಪರಿಗಣಿಸಲಾಗುತ್ತದೆ. ಆದರೆ ; ಮಾರುಕಟ್ಟೆಯ ದೃಷ್ಟಿಯಿಂದ ಎಲ್ಲ ಪಟಿಕಗಳಿಗಿಂತಲೂ ಮುಖ್ಯವಾದ ಮತ್ತು ಪಟಿಕ ಎಂದು ಬಳಕೆಯಲ್ಲಿರುವ ವಸ್ತು ಅಲ್ಯೂಮಿನಿಯಮ್ ಮತ್ತು ಪೊಟ್ಯಾಸಿಯಮುಗಳ ಜೋಡಿಸಲ್ಫೇಟ್  ಂಟ2[Sಔ4]3ಏSಔ424ಊ2ಔ.

	ಪಟಿಕವನ್ನು ಪಟಿಕದ ಮೃದುಪದರುಗಲ್ಲಿನಿಂದ (ಆಲ್ಮ್ ಶೇಲ್) ತಯಾರಿಸಲಾಗುತ್ತಿತ್ತು. ಭಾರತದಲ್ಲಿ ಈ ಮೃದುಪದರುಗಲ್ಲು ಸಿಕ್ಕುವ ಸ್ಥಳ ಪಂಜಾಬ್. ಇದಕ್ಕೆ ರೋಲ ಎಂಬ ಹೆಸರಿದೆ. ಇದು ಪೆರೈಟಿನ (ಈ2S2) ವ್ಯಾಪಕವಾದ ಅಲ್ಯೂಮಿನಿಯಮ್ ಸಿಲಿಕೇಟ್, ಇದರಲ್ಲಿ 9.5% ಗಂಧಕ ಉಂಟು. ಮೊದಲಿಗೆ ಈ ಮೃದುಪದರುಗಲ್ಲಿನ ರಾಶಿಯನ್ನು ಬಯಲಿನಲ್ಲಿ ಒಟ್ಟಿ ಕುರುಚಲು ಕಡ್ಡಿಯಿಂದ ಬೆಂಕಿ ಹಚ್ಚುತ್ತಿದ್ದರು. ಆಗ ಅದರಲ್ಲಿಯ ಗಂಧಕ ಉರಿದು ಉತ್ಕರ್ಷಣೆಯಾಗಿ ಸಲ್ಫ್ಯೂರಿಕ್ ಆಮ್ಲ ಮತ್ತು ಸಲ್ಫೇಟುಗಳಾಗಿ ರೂಪಾಂತರ ಹೊಂದುತ್ತಿತ್ತು. ಉಳಿದದ್ದನ್ನು ನೀರಿನಲ್ಲಿ ಕರಗಿಸಿ ಸಾರೀಕರಿಸಿ ಅದಕ್ಕೆ ಶೋರಾ(ಪೊಟ್ಯಾಸಿಯಮ್ ಮತ್ತು ಸೋಡಿಯಮ್ ಸಲ್ಫೇಟ್ ಅಶುದ್ಧತೆಗಳಿರುವ ಸೋಡಿಯಮ್ ನೈಟ್ರೇಟ್) ಮತ್ತು ಮರದ ಬೂದಿಯನ್ನು ಯುಕ್ತ ಪ್ರಮಾಣದಲ್ಲಿ ಹಾಕಿ ದಾವಣವನ್ನು ಒತ್ತಟ್ಟಿಗೆ ಇಡಲಾಗುತ್ತಿತ್ತು. ಈ ಅವಧಿಯಲ್ಲಿ ಪಟಿಕದ ಹರಳುಗಳು ಹೊರ ಬರುತ್ತವೆ. ಸ್ಫಟಿಕೀಕರಣ ಪ್ರರ್ತಿಯಾದ ಬಳಿಕ ಸ್ಫಟಿಕಗಳನ್ನು ಬೇರ್ಪಡಿಸಿ ಮರು ಸ್ಫಟಿಕೀಕರಿಸಿದಾಗ ಪಟಿಕ ದೊರೆಯುತ್ತಿತ್ತು. ಈಗ ಈ ವಿಧಾನವನ್ನು ಅನುಸರಿಸುವುದಿಲ್ಲ. ಅಲ್ಯೂಮಿನಿಯಮ್ ಸಲ್ಫೇಟ್ ಮತ್ತು ಪೊಟ್ಯಾಸಿಯಮ್ ಸಲ್ಫೇಟ್ ದ್ರಾವಣಗಳನ್ನು ಬೆರೆಸಿ ಸ್ಫಟಿಕೀಕರಿಸಿ ಪಟಿಕವನ್ನು ತಯಾರಿಸುತ್ತಾರೆ. ಭಾರತದಲ್ಲಿ ಈಗ ಬಾಕ್ಸೈಟ್ (ಅಲ್ಯೂಮಿನಿಯಮ್ ಆಕ್ಸೈಡ್) ಮತ್ತು ಸಲ್ಫ್ಯೂರಿಕ್ ಆಮ್ಲದಿಂದ ದೊಡ್ಡ ಮೊತ್ತದಲ್ಲಿ ಪಟಿಕವನ್ನು ತಯಾರಿಸಲಾಗುತ್ತದೆ.

	ಶುದ್ಧವಾದ ಪಟಿಕಕ್ಕೆ ಬಣ್ಣವಿಲ್ಲ. ರುಚಿಯಲ್ಲಿ ಇದು ಒಗರು. ಪಟಿಕಗಳು ಅಷ್ಟು ಸುಲಭವಾಗಿ ತಣ್ಣೀರಿನಲ್ಲಿ ವಿಲೀನವಾಗುವುದಿಲ್ಲವಾದ್ದರಿಂದ ಇವನ್ನು ಬಿಸಿ ನೀರಿನಲ್ಲಿ ಸ್ಫಟಿಕೀಕರಿಸಿ ಸುಲಭವಾಗಿ ಶುದ್ಧೀಕರಿಸಬಹುದು. ಎಲ್ಲ ಪಟಿಕಗಳೂ ಅಷ್ಟಮುಖೀ ಹರಳುಗಳನ್ನು ಕೊಡುತ್ತವೆ. ಎಂದರೆ ಎಲ್ಲವೂ ಸಮಾನಾಕೃತಿಯನ್ನು (ಐಸೊಮಾರ್ಫಸ್) ತೋರಿಸುತ್ತವೆ. ಪಟಿವನ್ನು 200 ಡಿ.ಸೆಂ. ಉಷúತೆಯಲ್ಲಿ ಕಾಸಿದಾಗ ಅದು ಕರಗಿ ತನ್ನ ಹರಳಿನ ಆಕೃತಿಯನ್ನೂ ಸ್ಫಟಿಕೀಕರಣದ ನೀರನ್ನೂ ಕಳೆದುಕೊಂಡು ಸರಂಧ್ರ ಪದಾರ್ಥವಾಗುವುದು. ಇದಕ್ಕೆ ಸುಟ್ಟ ಪಟಿಕೆ ಎಂದು ಹೆಸರು. ಮತ್ತೂ ಹೆಚ್ಚು ಉಷúತೆಯಲ್ಲಿ ಕಾಸಿದಾಗ ಇದು ವಿಭಜನೆ ಹೊಂದುತ್ತದೆ. ಪಟಿಕಗಳು ದೃಢವಾದ ಸಂಕೀರ್ಣ ಸಂಯುಕ್ತಗಳಲ್ಲ. ಏಕೆಂದರೆ ದ್ರಾವಣಗಳಲ್ಲಿ ಇವು ಅಂಗ ಲವಣಗಳ ಅಯಾನುಗಳನ್ನು ಕೊಡುತ್ತವೆ.

	ಪಟಿಕಕ್ಕೆ ರಕ್ತಸ್ರಾವವನ್ನು ತಡೆಗಟ್ಟುವ ಮತ್ತು ಪೂತಿನಾಶಕ ಗುಣಗಳಿವೆ. ಔಷಧಿಯನ್ನು ತಯಾರಿಸುವಲ್ಲಿ ಇದರ ಉಪಯೋಗ ಹೆಚ್ಚು. ಮಕ್ಕಳ ಭೇದಿ ಮತ್ತು ಕಾಲರಾವ್ಯಾಧಿಗಳನ್ನು ಇದು ಗುಣಪಡಿಸಬಲ್ಲದು. ಕಣ್ಣುಬೇನೆ ಮತ್ತು ಕಣ್ಣು ಉರಿ ಹೋಗಲಾಡಿಸುವಲ್ಲಿ ಇದರದ್ರಾವಣವನ್ನು ಬಳಸುವುದುಂಟು. ಪಟ್ಟಿಕವನ್ನು ಸುಟ್ಟು ದೊರೆತ ಪುಡಿಯನ್ನು ನಸ್ಯದಂತೆ ಮೂಗಿಗೆ ಏರಿಸಿ ಮೂಗಿನಲ್ಲಿಯ ರಕ್ತಸ್ರಾವವನ್ನು ತಡೆಗಟ್ಟಬಹುದು. ಶಹರಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ಪಟಿಕ ದೊಡ್ಡ ಗಾತ್ರದಲ್ಲಿ ಉಪಯೋಗಕ್ಕೆ ಬರುತ್ತದೆ. ಇದು ರಾಡಿ ನೀರನ್ನು ತಿಳಿನೀರಾಗಿ ಮಾಡಿ ಶುದ್ಧೀಕರಿಸುತ್ತದೆ. ಪಟಿಕಗಳು ರಾಸಾಯನಿಕವಾಗಿ ಬಲು ಶುದ್ಧವಾಗಿರುವಕಾರಣ ಬಟ್ಟೆಗಳಿಗೆ ಹಾಕುವ ಉದ್ದಿಮೆಯಲ್ಲಿ ಉಪಯುಕ್ತ ವಸ್ತಗಳಾಗಿವೆ. ಇಲ್ಲ ಪಟಿಕ ಕಬ್ಬಿಣದಿಂದ ಕಲುಷಿತವಾಗದ ಅಲ್ಯೂಮಿನಿಯಮನ್ನು ಹೊಂದಿರುತ್ತದೆ. ಈ ಅಲ್ಯೂಮಿನಿಯಮನ್ನು ಬಟ್ಟೆಯ ಮೇಲೆ ಅಲ್ಯೂಮಿನಿಯಮ್ ಹೈಡ್ರಾಕ್ಸೈಡಾಗಿ ಒತ್ತರಿಸಲಾಗುವುದು. ಇದು ವರ್ಣವಸ್ತುಗಳ ಬಂಧನಕಾರಿಯಂತೆ (ವರ್ಣ ಬಂಧಕ) ವರ್ತಿಸುತ್ತದೆ. ಸ್ಫುಟವಾದ ಬಣ್ಣವನ್ನು ಪಡೆಯಲು ಕಬ್ಬಿಣದ ಅಂಶವನ್ನು ತೆಗೆದುಹಾಕುವುದು ಅತ್ಯವಶ್ಯ. ಕಾಗದ ಉದ್ದಿಮೆಯಲ್ಲಿ ಇದನ್ನು ಹೊಳಪುಕಾರಕದಂತೆ ಬಳಸುತ್ತಾರೆ. ಅಗ್ನಿ ನಿರೋಧಕ ಕಾಗದ ಮತ್ತು ಬಟ್ಟೆಗಳನ್ನು ತಯಾರಿಸುವಲ್ಲಿಯೂ ಇದು ಬೇಕು. ಚರ್ಮವನ್ನು ಹದಮಾಡುವಲ್ಲಿ ಇದರ ಉಪಯೋಗವಿದೆ. ಅಲ್ಲದೆ ಸಕ್ಕರೆ, ಬೆಂಕಿಕಡ್ಡಿ, ರಂಗುಗಳು ಮೊದಲಾದವನ್ನು ತಯಾರಿಸುವ ಉದ್ದಿಮೆಗಳಲ್ಲಿ ಪಟಿಕವನ್ನು ಉಪಯೋಗಿಸುತ್ತಾರೆ.			(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ